ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುವ ಟೆಸ್ಟ್ ಕ್ರಿಕೆಟ್ ಸರಣಿ. ಭಾರತದ ಸುನಿಲ್ ಗವಾಸ್ಕರ್ ಹಾಗೂ ಆಸ್ಟ್ರೇಲಿಯಾದ ಅಲನ್ ಬಾರ್ಡರ್ ಅವರ ಹೆಸರನ್ನು ಈ ಸರಣಿಗೆ ಇಡಲಾಗಿದೆ. ಇವರಿಬ್ಬರೂ ತಮ್ಮ ತಂಡಗಳ ನಾಯಕರಾಗಿದ್ದವರು ಮತ್ತು ಇಬ್ಬರೂ ಟೆಸ್ಟ್‍ ಕ್ರಿಕೆಟ್‌ನಲ್ಲಿ ೧೦೦೦೦ ರನ್ನುಗಳನ್ನು ಗಳಿಸಿದ್ದಾರೆ. ಈ ಸರಣಿಯು ವಿಶ್ವದಲ್ಲಿಯೇ ಅತ್ಯಂತ ಪೈಪೋಟಿಯಿಂದ ಕೂಡಿರುವ ಸರಣಿಯೆಂಬ ಖ್ಯಾತಿ ಹೊಂದಿದೆ. = ಸರಣಿಯ ಪ್ರಮುಖ ಪಂದ್ಯಗಳು = ಕೊಲ್ಕತ್ತಾದ ಈಡನ್ ಗಾರ್ಡನ್ಸ್‍ ಮೈದಾನಲ್ಲಿ ೨೦೦೧ರಲ್ಲಿ ನಡೆದ ಎರಡನೆಯ ಟೆಸ್ಟ್‍. ‌ ಭಾರತಕ್ಕೆ ೧೭೧ ರನ್ನುಗಳಿಂದ ವಿಜಯ. ಹರಭಜನ್ ಸಿಂಗ್‌ಗೆ ಹ್ಯಾಟ್ರಿಕ್. ಹ್ಯಾಟ್ರಿಕ್ ಗಳಿಸಿದ ಭಾರತದ ಮೊದಲ ಬೌಲರ್. ವಿ ವಿ ಎಸ್ ಲಕ್ಷ್ಮಣ್ ೨೮೧ ರನ್. ಭಾರತದ ಬ್ಯಾಟ್ಸ್‍ಮನ್ ಒಬ್ಬರಿಂದ ಅತಿ ಹೆಚ್ಚು ರನ್ (ಅಂದಿಗೆ). ಭಾರತ ಫಾಲೋ ಆನ್ ಹೇರಿಸಿಕೊಂಡ ನಂತರವೂ ಪಂದ್ಯ ಗೆದ್ದ ಮೂರನೆಯ ತಂಡ. ೧೬ ಟೆಸ್ಟ್‍ ಪಂದ್ಯಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾದ ಓಟಕ್ಕೆ ತಡೆ. ಮುಂಬೈಯ ವಾನಖೇಡೆ ಕ್ರೀಡಾಂಗಣದಲ್ಲಿ ೨೦೦೪ರಲ್ಲಿ ನಡೆದ ನಾಲ್ಕನೆಯ ಟೆಸ್ಟ್‍. ‌ ಭಾರತಕ್ಕೆ ೧೩ ರನ್ನುಗಳಿಂದ ಜಯ. ಎರಡು ದಿನಗಳಲ್ಲಿ ಪಂದ್ಯ ಮುಕ್ತಾಯ. ಅತಿ ಕಡಿಮೆ ಅವಧಿಯಲ್ಲಿ ಮುಗಿದ ಪಂದ್ಯಗಳಲ್ಲೊಂದು. ಸಿಡ್ನಿಯಲ್ಲಿ ೨೦೦೭ರಲ್ಲಿ ನಡೆದ ಎರಡನೆಯ ಟೆಸ್ಟ್‍. ಕೇವಲ ೧೩ ನಿಮಿಷಗಳ ಆಟ (ಎರಡು ಓವರ್) ಬಾಕಿ ಇರುವಾಗ ಆಸ್ಟ್ರೇಲಿಯಾಗೆ ಜಯ. ಪ್ರಸಿದ್ಧ ತೀರ್ಪುದಾರರಾದ ಸ್ಟೀವ್ ಬಕ್ನರ್ ಅವರ ವಿವಾದಾತ್ಮಕ ತೀರ್ಪುಗಳಿಗಾಗಿ ಕುಖ್ಯಾತ. ಹರಭಜನ್ ಸಿಂಗ್ ಅವರ ಮೇಲೆ ಜನಾಂಗೀಯ ನಿಂದನೆಯ ಆರೋಪ. ಪರ್ತ್‌‍ನಲ್ಲಿ ೨೦೦೭ರಲ್ಲಿ ನಡೆದ ಮೂರನೆಯ ಟೆಸ್ಟ್‍.‍‍ ಭಾರತಕ್ಕೆ ೭೨ ರನ್ನುಗಳ ಜಯ. ೧೬ ಟೆಸ್ಟ್‍ ಪಂದ್ಯಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾದ ಓಟಕ್ಕೆ ಎರಡನೆಯ ಬಾರಿಗೆ ಭಾರತದಿಂದ ಅಡ್ಡಿ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ೨೦೧೦ರಲ್ಲಿ ನಡೆದ ಎರಡನೆಯ ಟೆಸ್ಟ್‍. ಭಾರತಕ್ಕೆ ೭ ವಿಕೆಟ್‌ಗಳ ಜಯ. ಸಚಿನ್ ತೆಂಡೂಲ್ಕರ್ ೧೪೦೦೦ ರನ್, ೬ನೇ ದ್ವಿಶತಕ. == ಉಲ್ಲೇಖಗಳು ==